ಡಿಸೆಂಬರ್ ೮ - ಡಿಸೆಂಬರ್ ತಿಂಗಳಿನ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೨ನೇ (ಅಧಿಕ ವರ್ಷದಲ್ಲಿ ೩೪೩ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೪೧ - ಎರಡನೇ ಮಹಾಯುದ್ಧದಲ್ಲಿ ಅಮೇರಿಕ ದೇಶ ಮತ್ತು ಚೀನ ಗಣರಾಜ್ಯಗಳು ಅಧಿಕೃತವಾಗಿ ಜಪಾನ್ ಮೇಲೆ ಯುದ್ಧವನ್ನು ಸಾರಿದವು. ೧೯೪೧ - ನಾಜಿ ಸರ್ಕಾರವು ಯಹೂದಿ ಜನರನ್ನು ಕೊಲ್ಲಲು ಮೊದಲ ಬಾರಿಗೆ ಪೊಲೆಂಡ್ನಲ್ಲಿ ವಿಷ ಅನಿಲಗಳನ್ನು ಉಪಯೋಗಿಸಿತು. ೧೯೭೪ - ಗ್ರೀಸ್ನಲ್ಲಿ ನಡೆದ ಜನಮತದಲ್ಲಿ ಅಲ್ಲಿನ ಚಕ್ರಾಧಿಪತ್ಯವನ್ನು ರದ್ದುಗೊಳಿಸುವುದಕ್ಕೆ ಬಹುಮತ ದೊರೆಯಿತು. ೧೯೯೧ - ರಷ್ಯಾ, ಬೆಲಾರುಸ್ ಮತ್ತು ಯುಕ್ರೇನ್ನ ನಾಯಕರು ಸೋವಿಯೆಟ್ ಒಕ್ಕೂಟವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು. == ಜನನ == ೧೮೭೫ - ತೇಜ್ ಬಹಾದೂರ್ ಸಪ್ರು, ಭಾರತದ ನ್ಯಾಯವಾದಿ ಮತ್ತು ರಾಜತಾಂತ್ರಿಕ ೧೯೩೫ - ಧರ್ಮೇಂದ್ರ, ಬಾಲಿವುಡ್ ನಟ. == ಮರಣ == ೧೮೬೪ - ಜಾರ್ಜ್ ಬೂಲ್, ಬ್ರಿಟನ್ನ ಗಣಿತಜ್ಞ. ೧೯೮೦ - ಜಾನ್ ಲೆನನ್, ಇಂಗ್ಲೆಂಡ್ನ ಬೀಟಲ್ಸ್ ತಂಡದ ಸಂಗೀತಕಾರ (ಹತ್ಯೆ). == ದಿನಾಚರಣೆಗಳು == ಭೌದ್ಧ ಧರ್ಮ - ಬೊಧಿ ದಿನ. ರೊಮೇನಿಯ - ಸಂವಿಧಾನ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ